Latest

ಕಾರ್ಕಳ :ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ

Share
Share

ಕಾರ್ಕಳ : ನಗರದ ಆರಾಮ್ ಇಂಡಸ್ಟ್ರಿಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವು ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರಗೋಡು ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ. ಕೆ ವಿಜಯಾಜಿಯವರು ರಕ್ಷಾ ಬಂಧನ ಹಬ್ಬದ ರಹಸ್ಯವನ್ನು ತಿಳಿಸುತ್ತಾ ಪ್ರಪಂಚದ ಸರ್ವ ಮನುಷ್ಯ ಆತ್ಮರು ಒಬ್ಬ ಪರಮಾತ್ಮನ ಸಂತಾನರು, ಪ್ರಸ್ತುತ ವರ್ತಮಾನ ಸಮಯದಲ್ಲಿ ಪ್ರಪಂಚದಲ್ಲಿ ಮನುಷ್ಯತ್ವ ಇಲ್ಲದ ವಾತಾವರಣ ನಿರ್ಮಿತ ವಾಗಿ, ಜನರಲ್ಲಿ ನೈತಿಕ, ಆಧ್ಯಾತ್ಮಿಕ ಶಕ್ತಿಯ ಕೊರತೆಯಿದೆ. ಇದಕ್ಕಾಗಿ ಪರಮಾತ್ಮನ ಅವತರಣೆಯಾಗಿದೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನೀಡುವ ಉಚಿತ ರಾಜಯೋಗ ಶಿಕ್ಷಣ ದಿಂದ ವಿಶ್ವ ನವ ನಿರ್ಮಾಣ ಕಾರ್ಯವು ಜರಗುತ್ತಿದೆ. ಯಾರು ಇದರ ಲಾಭವನ್ನು ಪಡೆಯುವರೋ ಅವರು ತಮ್ಮ ಜೀವನ ವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಸೇವಾಕೇಂದ್ರದ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮಿ ಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ. ಗಾಯತ್ರಿ, ಬಿ.ಕೆ. ಪ್ರಪುಲ್ಲ, ಬಿ.ಕೆ. ಶಾಂತ ರವರು ಈಶ್ವರೀಯ ಕಾಣಿಕೆ ನೀಡಿದರು. ಬಿ.ಕೆ. ವರದರಾಯ ಧನ್ಯವಾದಗಳನ್ನು ಅರ್ಪಿಸಿದರು.

Share

Leave a comment

Leave a Reply

Your email address will not be published. Required fields are marked *