ಬ್ರಹ್ಮಾ ಕುಮಾರೀಸ್ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆ ಇಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಲಾಯಿತು.
ಸ್ಥಳೀಯ ಶಾಲೆಗಳಲ್ಲಿ ಶಿಕ್ಷರಾಗಿರುವಂಥಹ ಹಾಗೂ ಇತ್ತೀಚೆಗೆ ನಿವೃತ್ತರಾದ ಸುಮಾರು 30 ರಷ್ಟು ಶಿಕ್ಷಕರನ್ನು ಗೌರವ ಪೂರ್ವಕ ವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಬ್ರಹ್ಮಾಕುಮಾರಿ ಕೇಂದ್ರದ ಸಂಚಾಲಕಿ ಹಾಗೂ ಹಿರಿಯ ರಾಜಯೋಗ ಶಿಕ್ಷಕಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ ಈ ಸಂದರ್ಭದಲ್ಲಿ ಮಾತಾಡಿ ಭವಿಷ್ಯದ ಉಜ್ವಲ ತಾರೆಗಳಿಗೆ ದಾರಿ ತೋರಿಸುವ ದೀಪಗಳಾದ ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದರು. ಇಂತಹ ಉನ್ನತ ಜವಾಬ್ದಾರಿಯ ವೃತ್ತಿಗೆ ಪೂರಕವಾಗಿ ಬ್ರಹ್ಮಾಕುಮಾರಿ ಧ್ಯಾನ ಕೇಂದ್ರದಲ್ಲಿ ತಿಳಿಸಿ ಕೊಡುವಂತಹ ರಾಜಯೋಗ ಧ್ಯಾನದ ಮಹತ್ವವನ್ನು ತಿಳಿಸಿ ಕೊಟ್ಟರು ಹಾಗೂ ಎಲ್ಲ ಶಿಕ್ಷಕರಿಗೂ ಈ ಧ್ಯಾನದ ಕಡೆಗೆ ಒಲವು ತೋರಿಸಲು ಕರೆ ನೀಡಿದರು.

ನಿಟ್ಟೆ ಬೃಂದಾವನ ಧ್ಯಾನ ಸಂಚಾಲಕಿ ಬಿ ಕೆ ಯಶೋದರವರು ಬ್ರಹ್ಮಾಕುಮಾರಿ ಸಂಸ್ಥೆಯ ಪರಿಚಯದೊಂದಿಗೆ ಭೌತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಸಾಮರಸ್ಯವನ್ನು ತಿಳಿಸಿಕೊಟ್ಟರು…
ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ಪ್ರಾಧ್ಯಾಪಕಿ ಡಾ. ವೀಣಾ ದೇವಿ ಯವರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಇನ್ನ, ಶ್ರೀಮತಿ ಶಶಿಕಲಾ ಶೆಟ್ಟಿ ನಿಟ್ಟೆ ಹಾಗೂ ಶ್ರೀಮತಿ ಜಯಂತಿ ಶೆಟ್ಟಿ ಬೆಳ್ಮಣ್ ಇವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ಫರು.
ಶಿಕ್ಷಕಿ ಮೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಬಿ ಕೆ ಮನೋಹರ್ ಶೆಟ್ಟಿ ವಂದನಾರ್ಪಣೆ ಗೈದರು.



Leave a comment