Latest

ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ ಧ್ಯಾನ ಕೇಂದ್ರದಲ್ಲಿ ‘ತಾಯಂದಿರ ದಿನ ‘ ಆಚರಣೆ

Share
Share

ಮೇ 10 ನೇ ತಾರೀಕು ‘ತಾಯಂದಿರ ದಿನ’ ದ ಆಚರಣೆಯನ್ನು ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ
ಧ್ಯಾನ ಕೇಂದ್ರದಲ್ಲಿ ನೆರವೇರಿಸಲಾಯಿತು.
ತಾಯಂದಿರ ಜೊತೆ ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಸಮಾಜದಲ್ಲಿ ತಾಯಂದಿರ ವಿಶೇಷ ಪಾತ್ರ ವನ್ನು ಚರ್ಚಿಸಿ ಮಾತನಾಡಿದ ಧ್ಯಾನ ಕೇಂದ್ರದ ಸಂಚಾಲಕಿ ಬಿ ಕೆ ಯಶೋದಾ, ತಾಯಿಯು ಪ್ರೀತಿಯ ಸಾಕಾರಮೂರ್ತಿ ಮತ್ತು ಜೀವನದ ಮೊದಲ ಗುರು. ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಮೂಲ್ಯ ಎಂದು ಅಭಿಪ್ರಾಯ ಪಟ್ಟರು.

 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾತೆಯರು ಅಮ್ಮಂದಿರ ಪಾತ್ರವು ಆಧುನಿಕತೆಯ ಜಗತ್ತಿನ ಜೊತೆಗೆ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ವಿಶ್ಲೇಷಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು, ಪಾಲ್ಗೊಂಡಿದ್ದ ಎಲ್ಲ ತಾಯಂದಿರು ಸಕ್ರಿಯವಾಗಿ ಭಾಗಿಯಾಗಿದ್ದರು.

 

 

 

Share

Leave a comment

Leave a Reply

Your email address will not be published. Required fields are marked *