Latest

ಕಾರ್ಕಳ ದುರ್ಗದಲ್ಲಿ ಪುಟಾಣಿಗಳಿಂದ ಹಸಿರು ಕ್ರಾಂತಿ

Share
Share

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕಾರ್ಕಳ ಶಾಖೆ , ದುರ್ಗಾ ಮಲೆ ಗಸ್ತು ವ್ಯಾಪ್ತಿಯ ದುರ್ಗಾ ಮಲೆ ಮೀಸಲು ಅರಣ್ಯದ ಕಡಂಬಳ ಎಂಬಲ್ಲಿ ಅರಣ್ಯ,ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಉಪಾಧ್ಯಕ್ಷರು ಆರತಿ ಅಶೋಕ್, ಪರಿಸರವಾದಿ ಗಳಾದ ಅಬೂಬಕ್ಕರ್, ಶೈಲೇಶ್ ಪುಚ್ಚೆ ಬೆಟ್ಟು , ಕ್ರೈಸ್ತ ಕಿಂಗ್ ಶಾಲೆಯ ಮಕ್ಕಳೊಂದಿಗೆ ಮಾವು, ಹಲಸು, ಹೆಬ್ಬಲಸು ಹಾಗೂ ಇತರ ಜಾತಿಯ ಮರಗಳ ಬೀಜಗಳನ್ನು ಹಾಕಲಾಯಿತು..

ಹಾರೆ ಪಿಕ್ಕಾಸು ಹಿಡಿದು 1,100 ಹಣ್ಣಿನ ಬೀಜ ಬಿತ್ತಿದ ವಿದ್ಯಾರ್ಥಿಗಳು
ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಪಾಠವನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಇಂದಿನ ಮಕ್ಕಳೇ ಮುಂದಿನ ಜನಾಂಗ
ಮಕ್ಕಳಿಗೆ ಪರಿಸರದ ಮೌಲ್ಯವನು ಮನದಟ್ಟು ಮಾಡಿಕೊಂಡರೆ ಮಾತ್ರ ಮುಂದಿನ ಭವಿಷ್ಯ ಸುರಕ್ಷಿತ.
ರೋಹಿನಿ, ಅರಣ್ಯ ಅಧಿಕಾರಿ ಕಾರ್ಕಳ
ಭಾಗವಹಿಸಿದವರು: ಕ್ರೈಸ್ಟ ಕಿಂಗ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ,  ಕಾರ್ಕಳ ಸುತ್ತಮುತ್ತಲಿನ ಪರಿಸರವಾದಿಗಳು ಹಾಗೂ ಇಲಾಖಾ ಸಿಬ್ಬಂದಿಯವರು.
ಭಾಗವಹಿಸಿದವರ ಸಂಖ್ಯೆ : 70
ನೆಟ್ಟ ಬೀಜಗಳು : ಮಾವು 800, ಹೆಬ್ಬಲಸು 200, ಹಲಸು 100 ಹಾಕಲಾಯಿತು.
ಪರಿಸರವಾದಿಗಳ ಕಳಕಳಿಯ ವಿನಂತಿ ಏನೆಂದರೆ, ನಾವು ಇದರ ಪಾಲನೆ ಪೋಷಣೆಯ ಅಗತ್ಯತೆಗಳ ಅನಿವಾರ್ಯದ ಬಗ್ಗೆ ಎತ್ತಿ ಹೇಳಲಾಯಿತು. ಜೂನ್ 5 ರಂದು ಮಾತ್ರ ಪರಿಸರ ದಿನವಾಗಿ ಕಾಣದೆ ಬರುವ ಪ್ರತಿ ತಿಂಗಳಲ್ಲೂ ಇದರ ಪಾಲನೆ ಪೋಷಣೆ ಅತಿ ಅಗತ್ಯ ಎಂದು ಎಲ್ಲರಿಗೂ ಮನದಟ್ಟು ಮಾಡಲಾಯಿತು.

Share

Leave a comment

Leave a Reply

Your email address will not be published. Required fields are marked *