
ಕಾರ್ಕಳ : ನಗರದ ಎಸ್. ವಿ. ಟಿ. ಶಾಲಾ ರಸ್ತೆಯ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಲುವಾಗಿ ಸಹಸ್ರ ಲಿಂಗ ದರ್ಶನ ವಿನುತನ ಕಾರ್ಯಕ್ರಮ ಫೆ. 15ರಂದು ಜರಗಿತು. ಇದರ ಉದ್ಘಾಟನೆ ಯನ್ನು ಎನ್. ಪಿ. ಗ್ರೂಪ್ ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಏನ್. ವಾಸುದೇವ್ ಭಟ್ ರವರು ನೆರವೇರಿಸಿದರು. ಶಿವರಾತ್ರಿಯ ಈ ಸಂದರ್ಭದಲ್ಲಿ ಸಹಸ್ರ ಲಿಂಗ ದರ್ಶನ ದಿಂದ ಸರ್ವರಿಗೂ ಪರಮಾತ್ಮ ಶಿವನ ಅನುಗ್ರಹ ವಾಗಲಿ ಎಂದರು. ಉಡುಪಿ ಜಿಲ್ಲಾ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸದಸ್ಯರಾದ ಕೃಷ್ಣಮೂರ್ತಿ ಯವರು ನಂಬಿಕೆ ಹಾಗೂ ವಿಶ್ವಾಸದಿಂದ ದೇವರಿಂದ ಇಷ್ಟಾರ್ಥ ಸಿದ್ದಿಸುತ್ತದೆ ಎಂದರು. ಭಾರತೀಯ ಜೇಸಿಸ್ ನ ಜೋನ್ 15ರ ವಲಯ ಕಾರ್ಯದರ್ಶಿ, ಸಮದ್ ಖಾನ್ ರವರು ಧರ್ಮ ಶರೀರಕ್ಕೆ ಸಂಬಂಧ ಪಟ್ಟ ವಿಷಯ, ನಾವೆಲ್ಲ ಒಬ್ಬ ಪರಮಾತ್ಮನ ಮಕ್ಕಳು ಎಂದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ನವೀನಚಂದ್ರ ಶೆಟ್ಟಿ ಯವರು ಧ್ಯಾನ ಮಂದಿರದ ವಾತಾವರಣ ದಲ್ಲಿ ಪರಮಾತ್ಮನ ಅನುಭುತಿ ಸಹಜವಾಗಿ ಪ್ರಾಪ್ತಿಯಾಗುತ್ತದೆ ಎಂದರು.


ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಇವರು ಮಾತನಾಡುತ್ತಾ ಪರಮಾತ್ಮನು ಸರ್ವ ಧರ್ಮದವರಿಗೂ ಓಬ್ಬರೇ ಆಗಿದ್ದಾರೆ. ಪರಮಾತ್ಮನನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದು ಧರ್ಮಗ್ಲಾನಿಯ ಈ ಸಮಯದಲ್ಲಿ ಪರಮಾತ್ಮನು ಧರೆಗೆ ಇಳಿದು ಪ್ರಜಾಪಿತ ಬ್ರಹ್ಮನ ಶರೀರದಲ್ಲಿ ಪ್ರವೇಶಿಸಿ ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಇಂದು ಈಶ್ವರೀಯ ವಿಶ್ವ ವಿದ್ಯಾಲಯವು ನೂರ ನಾಲ್ವತ್ತು ರಾಷ್ಟಗಳಲ್ಲಿ ತನ್ನ ಸೇವಾ ಕೇಂದ್ರದ ಮೂಲಕ ಮನ: ಶಾಂತಿಯ ಜೊತೆಗೆ ವಿಶ್ವ ಶಾಂತಿಯ ಕಾರ್ಯವನ್ನು ಮಾಡುತ್ತಿದ್ದಾರೆ. ಸಂಸ್ಥೆಯು ವಿಶ್ವ ಸಂಸ್ಥೆಯಿಂದ ಶಾಂತದ ವಿಶ್ವಶಾಂತಿಗಾಗಿ ಸಲಹೆಗಾರ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಇಂದು ಲಕ್ಷಾಂತರ ಜನರು ಸಂಸ್ಥೆಯಿಂದ ಲಾಭ ಪಡೆಯುತ್ತಿದ್ದು ಸಾರ್ವಜನಿಕರು ಇಲ್ಲಿ ಉಚಿತವಾಗಿ ಕಲಿಸಿಕೊಡುವಂತಹ ರಾಜಯೋಗ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಬಿ. ಕೆ ಶಾಂತ ಸ್ವಾಗತಿಸಿದರು, ಬಿ. ಕೆ ಗಾಯತ್ರಿ ಧನ್ಯವಾದ ಅಪಿಸಿದರು, ಬಿ.ಕೆ ವರದರಾಯ ಪ್ರಭು ಕಾರ್ಯಕ್ರಮ ನಿರ್ದೇಶಿಸಿದರು.




Leave a comment