Latest

ಮಹಾಶಿವರಾತ್ರಿಯ ರಹಸ್ಯ

Share
Share

ವಿಶ್ವ ಪರಿವರ್ತನೆಗೆ ಆಧಾರಸ್ತಂಭ ಶಿವರಾತ್ರಿ

ಪರಿವರ್ತನೆ ಪ್ರಕೃತಿಯ ಸ್ವಾಭಾವಿಕ ನಿಯಮವಾದರೂ ಮಾನವ ಪರಿರ‍್ತನೆಗೋಸ್ಕರ ತನ್ನ ಪ್ರಯತ್ನವನ್ನು ಮಾಡುತ್ತಿದ್ದಾನೆ. ನಾವು ಇಂದು ಕಠಿಣ ಪರಿಸ್ಥತಿಯ ಮೂಲಕ ಸಾಗುತ್ತಿದ್ದೇವೆ ಮತ್ತು ಪ್ರತಿಯೊಬ್ಬರ ಅಂತರಾತ್ಮವು ಬೇಗನೆ ಪರಿವರ್ತನೆ ಆಗಲಿ ಎಂದು ಬಯಸುತ್ತವೆ. ಏಕೆಂದರೆ ಇಂದು ಧರ್ಮಸತ್ತೆ ಹಾಗೂ ರಾಜ್ಯಸತ್ತೆ ಎರಡು ಶಕ್ತಿಯನ್ನೂ ಕಳೆದುಕೊಂಡಿದೆ. ಮಾನವರು ದು.ಖವನ್ನು ಸುಖದಲ್ಲಿ, ಅಶಾಂತಿಯನ್ನು ಶಾಂತಿಯಲ್ಲಿ, ತಿರಸ್ಕಾರವನ್ನು ಪ್ರೇಮದಲ್ಲಿ, ಅಜ್ಞಾನವನ್ನು ಸುಜ್ಞಾನದಲ್ಲಿ, ಪರಿವರ್ತನೆ ಮಾಡಿ ಒಬ್ಬ ಪರಮಪಿತ ಪರಮಾತ್ಮನ ಅವತರಣೆಯ ನೆನಪಿಗಾಗಿ ಪ್ರತಿ ವರ್ಷ ಶಿವರಾತ್ರಿಯನ್ನು ಆಚರಿಸುತ್ತಾರೆ.

ಶಿವರಾತ್ರಿಯ ಹಿನ್ನೆಲೆಯಲ್ಲಿ ಅಡಗಿರುವ ಅಧ್ಯಾತ್ಮಿಕ ರಹಸ್ಯವನ್ನು ನಾವು ಸಂಪೂರ್ಣ ರೀತಿಯಲ್ಲಿ ತಿಳಿದುಕೊಂಡರೆ ವಿಶ್ವ ಪರಿವರ್ತನೆಯ ಕಾರ್ಯ ಸರಳವಾಗುತ್ತದೆ. ಏಕೆಂದರೆ ಶಿವರಾತ್ರಿಯು ಶೈವ ಸಂಪ್ರದಾಯದ ಭಕ್ತರ ಹಬ್ಬ ಮಾತ್ರವಲ್ಲದೆ ಇಡಿ ಜಗತ್ತಿನ ಪ್ರಮುಖ ಧರ್ಮ, ಪ್ರಾಚೀನ ಸಭ್ಯತೆ ಹಾಗೂ ಸಂಸ್ಕಂತಿಯನ್ನು ನೋಡಿದಾಗ ಇದು ವಿಶ್ವದ ಸರ್ವ ಆತ್ಮರ ಪಾವನ ಪರ್ವವಾಗಿದೆಯೆಂದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಮಹಾಭಾರತದ ಆರಂಭದಲ್ಲಿ ಈ ಸೃಷ್ಟಿಯು ತಮೊಗುಣ ಹಾಗೂ ಅಂಧಕಾರದಿಂದ ಕೂಡಿದ್ದು ತದ ನಂತರ ಒಂದು ಅಂಡಾಕಾರ ಜ್ಯೋತಿಯು ಪ್ರಕಟವಾಯಿತು ಮತ್ತು ಆ ಜ್ಯೋರ್ತಿಲಿಂಗದಿಂದ ಹೊಸ ಯುಗದ ಸ್ಥಾಪನೆ ಆಯಿತು ಆ ಜ್ಯೋತಿಯ ಕೆಲ ಶಬ್ದಗಳಿಂದ ಅಲೌಕಿಕ ರೀತಿಯಲ್ಲಿ ಪ್ರಜಾಪಿತ ಬ್ರಹ್ಮಾರವರ ಜನ್ಮವಾಯಿತು ಎಂದು ಬರೆಯಲಾಗಿದೆ. ಮನುಸ್ಮಂತಿಯಲ್ಲಿ ಸೃಷ್ಟಿಯ ಆರಂಭದಲ್ಲಿ ಒಂದು ಅಂಡಾಕಾರ ಪ್ರಕಟವಾಯಿತು ಮತ್ತು ಅದು ಸಾವಿರ ಸೂರ್ಯ ಸಮಾನ ತೇಜೋಮಯ ಹಾಗೂ ಪ್ರಕಾಶಮಯವಾಗಿತ್ತು-ಎಂದು ಬರೆಯಲ್ಲಟ್ಟಿದೆ. ಇದೆ ರೀತಿ ಶಿವಪುರಾಣದ ಧರ್ಮಸಂಹಿತೆಯಲ್ಲಿಯೂ “ಕಲಿಯುಗದ ಅಂತಿಮ ಸಮಯದಲ್ಲಿ ಒಂದು ಅದ್ಭುತ ಜ್ಯೋರ್ತಿಲಿಂಗವು ಪ್ರಕಟವಾಯಿತು, ಅದು ಕಾಲಾಗ್ನಿಸಮಾನ ಜ್ವಾಲಾಮಯವಾಗಿತ್ತು. ಅದು ಬೆಳೆಯುತ್ತಿರಲಿಲ್ಲ. ಅದು ಸುಂದರವಾಗಿತ್ತು. ಅದರಿಂದಲೆ ಸೃಷ್ಟಿಯ ಪ್ರಾರಂಭವಾಯಿತು.” ಎಂದು ಬರೆಯಲ್ಪಟ್ಟಿದೆ.

ಹಾಗೆ ನೋಡಿದರೆ ಭಾರತದ ಧರ್ಮ ಗ್ರಂಥದಲ್ಲಿ ಮಾತ್ರವಲ್ಲದೆ ಯಹೂದಿ, ಇನಾಯಿ ಹಾಗೂ ಮುಸಲ್ಮಾನರ ಹಳೆಯ ಧರ್ಮಗ್ರಂಥನಾದ ‘ತೊರೆತ್’ ದಲ್ಲಿಯೂ ಸಹ ಸೃಷ್ಟಿಯ ರಚನೆಯ ಬಗ್ಗೆ ಬರೆದಿದೆ ‘ಏನಂದರೆ ಸೃಷ್ಟಿಯ ಆರಂಭದಲ್ಲಿ ಈಶ್ವರನ ಆತ್ಮವು ನೀರಿನ ಮೇಲೆ ತೇಲಾಡುತ್ತಿತ್ತು. ಆದಿ ಕಾಲದಲ್ಲಿ ಪರಮಾತ್ಮನು ಆದಮ ಮತ್ತು ಹವ್ವಾ ಅವರ ರಚನೆ ಮಾಡಿ ಸ್ವರ್ಗವನ್ನು ಸ್ಥಾಪನೆ ಮಾಡಿದನು’. ಭಗವಂತನ ಹೆಸರು ‘ಜಹೊವಾ’ ಎಂದು ಹೇಳುತ್ತಾರೆ. ಅದು ಶಿವನ ಪರ್ಯಾಯ ವಾಚಕ ಶಬ್ದವಾಗಿದೆ. ಭಾರತದ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯಲ್ಲಿ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜೈನಲ್ಲಿ ಮಹಾಕಾಳೇಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೇಶ್ವರ ಮುಂತಾದವು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರರಾಷ್ಟ್ರಗಳ ಸಂಸ್ಕೃಂತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ಸೇವಾಳದಲ್ಲಿ ಪಶುಪತಿನಾಥ, ಬೆಬಿಲೋನನಲ್ಲಿ ಶಿವನಿಗೆ ‘ಶಿವೂನ’ ಎಂದು ಹೇಳಲಾಗುತ್ತದೆ. ಮಿಶ್ರದಲ್ಲಿ ಸೇವಾ’ ನಾಮದಿಂದ ಪೂಜೆಯು ನಡೆಯುತ್ತದೆ. ರೊಮದಲ್ಲಿ `ಪ್ರಿಯನ್ಸ್’ ಎಂದು ಹೇಳಲಾಗುತ್ತದೆ ಇಟಲಿಯ ಚರ್ಚಗಳಲ್ಲಿ ಇಂದಿಗೂ ಶಿವನ ಪ್ರತಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ ‘ಹೂವೆಡ್ ಹಿಪೂಹ’ ಎಂದು ಕರೆಯಲಾಗುತ್ತದೆ. ಯುನಾನದಲ್ಲಿ ‘ಫಲ್ಲೂನ’, ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ ‘ಶಿವೂ’ ಎಂದು ಹೇಳುತ್ತಾರೆ. ಕಾಬಾದಲ್ಲಿ ಶಿವನ ಪ್ರತಿಮೆ ಇತ್ತು ಅದರಿಂದಲೆ ಸಂಶೋಧಕರು ‘ಕಾಬಾ’ನು ಸಹ ಶಿವಾಲಯ ಇತ್ತು ಎಂದು ನಂಬುತ್ತಾರೆ. ಇದರಿಂದಲೆ ಶಿವಪರಮಾತ್ಮನು ವಿಶ್ವ ಪರಿವರ್ತನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂದು ಸ್ಪಷ್ಟವಾಗುತ್ತದೆ.

‘ಶಿವ’ ಶಬ್ದವು ಪರಮಾತ್ಮನು ಕಲ್ಯಾಣಕಾರಿ ಎಂಬುದನ್ನು ಸೂಚಿಸುತ್ತದೆ. ೧೦-೧೨ ಘಂಟೆಗಳ ರಾತ್ರಿಯಲ್ಲಿ ವಿಶ್ವಪರಿವರ್ತನೆಯು ಸಾಧ್ಯವಾಗುವದಿಲ್ಲ. ಇಲ್ಲಿ ರಾತ್ರಿ ಶಬ್ದವು ಅಜ್ಞಾನ, ತಮೋಗುಣ, ಆಲ, ಎಂಬ ಅಂಧಕಾರದ ಪ್ರತೀಕವಾಗಿದೆ. `ಮಹಾರಾತ್ರಿ’ ಎಂದರೆ ನೃಷ್ಟಿಯಲ್ಲಿ ಕರ್ಮಭ್ರಷ್ಟತೆ, ಧರ್ಮಭ್ರಷ್ಟತೆ, ಮತ್ತು ವಿಕಾರಗಳ ಪ್ರಧಾನತೇಯ ಪ್ರತಿಕವಾಗಿದೆ. ಇದಕ್ಕೆ ಕಲಿಯುಗದ ಅಂತಿಮ ಸಮಯ ಎಂದು ಕರೆಯಲಾಗುತ್ತದೆ. ಇಂತಹ ಸಮಯದಲ್ಲಿ ಪರಮಪಿತ ಶಿವ ಪರಮಾತ್ಮನ ಅವತರಣೆ ಆಗಿ ಅವರು ವಿಶ್ವಕಲ್ಯಾಣದ ಕರ್ತವ್ಯವನ್ನು ಮಾಡುತ್ತಾರೆ. ಈ ಕಾರಣಕ್ಕೆ ‘ಶಿವರಾತ್ರಿ’ ಎಂದು ಹೇಳುತ್ತಾರೆ.

ಶಿವರಾತ್ರಿಯ ಸಮಯದಲ್ಲಿ ಎಲ್ಲರಿಗೂ ಶಿವನ ಸತ್ಯ ಪರಿಚಯವನ್ನು ನೀಡಿದರೆ ಸರ್ವ ಸಂಪ್ರದಾಯರವರನ್ನು ಒಂದೇ ಸೂತ್ರದಲ್ಲಿ ಕಟ್ಟಬಹುದು. ಏಕೆಂದರೆ ಪರಮಪಿತ ಶಿವನ ಸ್ಮೃತಿ ಸ್ವರೂಪನಾದ ಶಿವಲಿಂಗವು ಸರ್ವತ್ರ  ಸರ್ವಧರ್ಮಗಳಿಂದ ಮಾನ್ಯತೆಯನ್ನು ಪಡೆದಿದೆ. ಮಕ್ಕಾದಲ್ಲಿ ಇರುವ ‘ನಂಗ ಎ ಅಸ್ವದ’ ನಿಗೆ ಮುಸಲ್ಮಾನರು ಪ್ರೀತಿ ಹಾಗೂ ಗೌರವ ತೋರಿಸುತ್ತಾರೆ. ಏಕೆಂದರೆ ಅದು ಭಗವಂತ ಕಳಿಸಿರುವದು ಎಂದು ನಂಬುತ್ತಾರೆ. ಅವರಿಗೆ ಭಾರತೀಯರು ಮಾನ್ಯತೆಕೊಡುವ ‘ಖುದಾ’ ಅಥವಾ `ಭಗವಾನ’ ಶಿವನೆ ಎಂದು ತಿಳಿದರೆ, ಎರಡು ಧರ್ಮಗಳಲ್ಲಿ ಭಾವನಾತ್ಮಕ ಐಕ್ಯತೆ ಕಾಣಬಹುದು. ಅದೇ ರೀತಿ ‘ಓಲ್ಲ ಟೆನ್ಸಾಮೆಂಟ’ ನಲ್ಲಿ ಮುಸಾ ಅವರು ಮಾಡಿರುವ ಜಹೋವಾನ ವರ್ಣನೆಯ ಜ್ಯೋರ್ತಿಬಿಂದುವೇ ಪರಮಾತ್ಮ ಆಗಿದ್ದಾನೆ ಎಂದು ತಿಳಿದುಕೊಂಡರೆ ಎಲ್ಲಾ ರಾಷ್ಟ್ರಗಳಲ್ಲಿ ಬ್ರಾತೃತ್ವದ ಭಾವನೆ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕತೆಯನ್ನು ಕಾಣಬಹುದು.

ಭಾರತೀಯರಲ್ಲಿ ಶಿವಲಿಂಗವು ಪರಮಪಿತ ಶಿವನ ಕುರುಹಾಗಿದೆ ಎಂದು ತಿಳಿದರೆ ವೈಷ್ಣವ ಹಾಗೂ ಶೈವರಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಬಹುದು ರಾಮೇಶ್ವರದಲ್ಲಿ ಇರುವ ರಾಮನಿಗೆ ಈಶ್ವರ ಶಿವ, ಬೃಂದಾವನದಲ್ಲಿ ಇರುವ ಗೋಪೇಶ್ವರ ಕೃಷ್ಣನಿಗೂ ಈಶ್ವರ, ಶಿವ ಹಾಗೂ ಎಲಿಫೆಂಟಾದಲ್ಲಿ ಇರುವ ತ್ರಿಮೂರ್ತಿ ಶಿವನ ಮೂರ್ತಿಗಳಿಂದ ಸರ್ವಧರ್ಮಗಳ ಸೂತ್ರವನ್ನು ಬೋಧಿಸುವನು ಪರಮಪಿತ ಶಿವನೇ ಆಗಿದ್ದಾನೆ ಎಂದು ಸ್ಪಷ್ಟವಾಗುತ್ತದೆ.

ಶಿವರಾತ್ರಿಯಲ್ಲಿ ಉಪವಾಸದ ಅರ್ಥ’ಉಪ’ ಎಂದರೆ ಸಮೀಪ’ ವಾಸ ಎಂದರೆ ‘ಇರುವುದು’, ವಾಸ್ತವಿಕವಾಗಿ ಬುದ್ಧಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಕೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಒಂದು ರಾತ್ರಿ ನಿದ್ರೆಕೆಟ್ಟು ಜಾಗರಣೆ ಮಾಡಿದರೆ ಸಾಲದು. ಈ ಅಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಎಚ್ಚರವಾಗಿದ್ದು ಮಾಯೆಯ ರೂಪವಾದ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ

ಹೀಗೆ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದುಕೊಂಡು ನಿಜವಾದ ರೀತಿಯಲ್ಲಿ ಜಾಗರಣೆ ಹಾಗೂ ಉಪವಾಸ ಮಾಡಿದರೆ ವಿಶ್ವ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ್ಲ.

                ಶಿವರಾತ್ರಿ ಮತ್ತು ಶರಣರ ದೃಷ್ಟಿಯಲ್ಲಿ ಶಿವ

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ ‘ಶಿವರಾತ್ರಿಯೇ ಸರ್ವಶ್ರೇಷ್ಠ’, ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನೂ ಆದ ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೆಶ್ರ‍್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ದ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ ಇದೆ.

ಶಿವರಾತ್ರಿಯ ಈ ಸಮಯದಲ್ಲಿ ಶಿವನ ಸತ್ಯ ಪರಿಚಯ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಶಿವನು ಅಜನ್ಮ, ಆಯೋನಿಜ, ಅವ್ಯಕ್ತ,ಅಮರ, ಅವಿನಾಶಿ, ಅಭೋಕ್ತ, ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಪುರಾಣ, ಸ್ಕಂದಪುರಾಣ, ಶಿವಸ್ತುತಿ, ದಾಸಸಾಹಿತ್ಯ, ಶರಣರ ಸಾಹಿತ್ಯದಲ್ಲಿ ವಿಸ್ತಾರವಾಗಿ ಮಾಡಲಾಗಿದೆ. ಅದರಲ್ಲೂ ಶರಣರ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಶಿವಶರಣರು ಬರೆದಿರುವ ವಚನಗಳಲ್ಲಿ ಆಯ್ದ ಕೆಲವು ವಚನಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಶಿವಪರಮಾತ್ಮನು ಜ್ಯೋರ್ತಿಲಿಂಗ ಸ್ವರೂಪಿ, ಅಕಾಯ, ಅಶರೀರಿ, ಅಜಾತ ಪರಮ ಪವಿತ್ರನಾಗಿದ್ದಾನೆ. ಅವನು ದೇವ-ದಾನವ-ಮಾನವರಂತೆ ಹೆಂಡತಿ ಮಕ್ಕಳನ್ನು ಪಡೆದವನಲ್ಲ, ಗೃಹಸ್ಥನಲ್ಲ ಎಂದು ಶರಣ ಬಸವಣ್ಣನವರು ಈ ಕೆಳಗಿನ ವಚನಗಳಲ್ಲಿ ಸಾರಿದ್ದಾರೆ.

ಬೆನಕನು ಹರನ(ಶಿವನ) ಮಗನೆಂಬ

ಪಾತಕರೆ ನೀವೂ ಕೇಳಿರೋ

ಪಾರ್ವತಿಯು ಹರನ(ಶಿವನ) ಸತಿಯೆಂಬ

ಶಿವದ್ರೋಹಿಗಳ ನೀವೂ ಕೇಳಿರೋ

ಲಿಂಗದ್ರೋಹಿಗಳೇ ನೀವೂ ಕೇಳಿರೋ

ಅಜಾತ-ಪರಮಪವಿತ್ರನೊಬ್ಬನೇ

ಕೂಡಲ ಸಂಗಮದೇವ ಕಾಣಿರೋ.

ಶರಣ ಅಂಬಿಗರ ಚೌಡಯ್ಯನವರು ಶಿವನಿಗೆ ಅಸುರ-ಮಾಲೆ, ತ್ರಿಶೂಲ, ಢಮರು, ಭಸ್ಮ, ಬ್ರಹ್ಮಕಪಾಲ, ವೃಷಭ ವಾಹನ, ಪತ್ನಿ, ಪುತ್ರ, ಸಂಸಾರಗಳಿಲ್ಲವೆಂಬ ಸತ್ಯವನ್ನು ತಮ್ಮ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ಅಸುರ ಮಾಲೆಗಳಿಲ್ಲ – ತ್ರಿಶೂಲ ಢಮರುಗವಿಲ್ಲ

ಬ್ರಹ್ಮಕಪಾಲವಿಲ್ಲ – ಭಸ್ಮಭೂಷಣನಲ್ಲ

ವೃಷಭವಾಹನನಲ್ಲ ಋಷಿಯ ಮಗಳೊಡನಿದ್ದಾತನಲ್ಲ

ಎಸಗುವ ಸಂಸಾರದ ಕುರುಹಿಲ್ಲದಾತಂಗೆ

ಹೆಸರಾವುದು ಎಂದ – ಅಂಬಿಗರ ಚೌಡಯ್ಯ.

ಶಿವಶರಣೆ ಅಕ್ಕಮಹಾದೇವಿಯು ತನ್ನ ವಚನದಲ್ಲಿ ಪರಮಾತ್ಮನ ಸತ್ಯ ಕುರುಹನ್ನು ಬಹಳ ಸುಂದರವಾಗಿ ವಿವರಿಸಿದ್ದಾಳೆ.

ಜ್ಯೋತಿಸ್ವರೂಪಿ ಅತ್ಮಳಾದ ತನಗೆ ಜ್ಯೋರ್ತಿಲಿಂಗ ಸ್ವರೂಪಿ ಪರಮಾತ್ಮನಾದ ಶಿವನೇ ಪತಿ ಎಂದು ಸಾರಿದ್ದಾಳೆ. ದೇಹಧಾರಿಗಳು ತನಗೆ ಪತಿಯಲ್ಲವೆಂದೂ ಹೇಳಿದ್ದಾಳೆ. ಅಕ್ಕಮಹಾದೇವಿಯ ಪತಿ ತಾನೆಂದು ಎಂದಾದರೂ, ಯಾರಾದರೂ ಹೇಳಿದರೆ ಅಂತಹವರನ್ನು ಒಲೆಯಲ್ಲಿನ ಬೆಂಕಿಯಲ್ಲಿ ಬಿಸಾಡಿ ಎನ್ನುತ್ತಾಳೆ. ಹೀಗೆ ಶಿವನಿಷ್ಠೆ, ಈಶ್ವರನ ನಿಷ್ಠೆಯನ್ನು ಅಕ್ಕಮಹಾದೇವಿಯು ಪ್ರತಿಪಾದಿಸಿದ್ದಾಳೆ ಅವುಗಳನಿಲ್ಲಿ ಅವಲೋಕಿಸೋಣ.

ಸಾವಿಲ್ಲದ ಕೇಡಿಲ್ಲದ – ರೂಹಿಲ್ಲದ ಚೆಲುವಂಗೆ ನಾ ಒಲಿದೆನವ್ವ

ಎಡೆಯಿಲ್ಲದ, ಕಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ

ಚೆಲುವಂಗೆ ನಾ ಒಲಿದೆ ಎಲೆ ಅವ್ವಗಳಿರಾ

ಭವವಿಲ್ಲದ – ಭಯವಿಲ್ಲದ ನರ‍್ಭಯ ಚಲುವಂಗೆ ಒಲಿದೆನವ್ವ

ಕುಲಸೀಮೆ ಇಲ್ಲದ ನಿಸ್ವೀಮ ಚಲುವಂಗೆ ಒಲಿದೆನವ್ವ

ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆನವ್ವಗಳಿರಾ

ಸಾಯುವ ಕೆಡುವ ಗಂಡರನೊಯ್ದು ಒಲೆಯೊಳಗಿಡು ಎಲೆ ತಾಯೆ.

ಬಸವೇಶ್ವರರು ತಮ್ಮ ವಚನಗಳಲ್ಲಿ ಜನರ ಅಜ್ಞಾನವನ್ನು ಈ ರೀತಿ ವರ್ಣಿಸಿದ್ದಾರೆ

ನೀರ ಕಂಡಲ್ಲಿ ಮುಳುಗುವರಯ್ಯ

ಮರನ ಕಂಡಲ್ಲಿ ಸುತ್ತುವರಯ್ಯ

ಬತ್ತುವ ಜಲವ, ಒಣಗುವ ಮರವ ಬಲ್ಲವರು

ನಿಮ್ಮನತ್ತ ಬಲ್ಲರು ಕೂಡಲಸಂಗಮದೇವ,

ಅರಗು ತಿಂದು ಕರಗುವ ದೈವವ

ಉರಿಯ ಕಂಡಡೆ ಮುರುಟುವ ದೈವವ

ಅವಸರ ಬಂದರೆ ಮಾರುವ ದೈವವ

ಎಂತು ಸರಿ ಎಂಬೆನಯ್ಯಾ ಅಂಜಿಕೆಯಾದಡೆ ಹೂಳುವ ದೈವವ ಎಂತು ಸರಿ ಎಂಬೆನಯ್ಯಾ ಸಹಜ ಭಾವ ನಿಜೈಕ್ಯ

ಕೂಡಲಸಂಗಮದೇವನೊಬ್ಬನೇ ದೇವ ಕಾಣಿರೋ.

ತಂದೆ-ತಾಯಿ ಸರ್ವ ಸಂಬಂಧ ಶಿವ ಎಂದು ಶಿವಯೋಗಿ ಬಸವಣ್ಣನವರು ಹೇಳಿದ್ದಾರೆ.

ತಂದೆ ನೀನು – ತಾಯಿ ನೀನು

ಬಂಧು ನೀನು – ಬಳಗ ನೀನು

ನೀನಲ್ಲದೆ ಮತ್ತಾರೂ ಇಲ್ಲವಯ್ಯಾ

ಕೂಡಲಸಂಗಮದೇವಾ

ಹಾಲಲದ್ದು – ನೀರಲದ್ದು.

ಸಕಲ ಭುವನಾದಿ ಭುವನಂಗಳಿಗೆ ತಂದೆ

ಸಕಲ ದೇವಾದಿ ದೇರ‍್ಕಂಗಳಿಗೆ ತಂದೆ

ಭವ ಭವದಲ್ಲಿ ನೀನೆನ್ನ ತಂದೆ

ಗುಹೇಶ್ವರ ಅಂಗ ನಿರಾಳದಲ್ಲಿ ನೀನೆನ್ನ ತಂದೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೇ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿಯೂ ಅಜ್ಞಾನವೆಂಬ ಕತ್ತಲು ಕವಿದಿರುವ ರಾತ್ರಿ ಇದಾಗಿರುತ್ತದೆ. ಅಜ್ಞಾನಾಂಧಕಾರ ಅವರಿಸಿರುವ ರಾತ್ರಿ ಇದಾಗಿರುತ್ತದೆ. ಯಾವಾಗ ಎಲ್ಲ ಮಾನವರೂ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಆರಾಜಕತ್ರ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿತುಳುಕುತ್ತಿವೆಯೋ, ಎಲ್ಲಿ ಅಧಿಕಾರ-ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಸುಳ್ಳುಗ್ರಂಥಗಳ ಮಾರ್ಗದರ್ಶನ, ಅಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೆ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ ಯಾವಾಗ ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೇ’ ಎಂದು ಜನಸಾಮಾನ್ಯರು, ಸಾಧು ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ, ಅದೇ ಘೋರ ರಾತ್ರಿಯಲ್ಲಿ ಶಿವ ಪರಮಾತ್ಮನ ಅವತರಣೆ ಆಗುತ್ತದೆ.

ಭಾರತದ ಹಾಗೂ ವಿಶ್ವದಾದ್ಯಂತ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜ್ಜಯನಿಯಲ್ಲಿ ಮಹಾಕಾಲೇಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿನಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೇಶ್ವರ ಮುಂತಾದ ಕ್ಷೇತ್ರಗಳಲ್ಲಿ ಶಿವನ ಮಂದಿರಗಳನ್ನು ಕಾಣಬಹುದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಹೊರರಾಷ್ಟ್ರಗಳ ಸಂಸ್ಕೃಂತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ನೇಪಾಳದಲ್ಲಿ ಪಶುಪತಿನಾಥ, ಬ್ಯಾಬಿಲೋನಿಯಾದಲ್ಲಿ ಶಿವನಿಗೆ ‘ಶಿವೂನ’ ಎಂದು ಹೇಳಲಾಗುತ್ತದೆ. ಈಜಿಪ್ಪಲ್ಲಿ ಸೇವಾ’ ನಾಮದಿಂದ ಪೂಜೆಯು ನಡೆಯುತ್ತದೆ. ರೋಮ್ನಲ್ಲಿ ‘ಪ್ರಿಯಟ್ಸ್’ ಎಂದು ಹೇಳಲಾಗುತ್ತದೆ. ಇಟಲಿಯ ಚರ್ಚ್ಗ ಳಲ್ಲಿ ಇಂದಿಗೂ ಶಿವನ ಪ್ರತಿಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ ‘ಹೂವೆಡ್ ಹಿಪೂಹ’ ಎಂದು ಕರೆಯಲಾಗುತ್ತದೆ. ಗ್ರೀಕ್ನಲ್ಲಿ ಫಲ್ಲೂನ’, ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ ‘ಶಿವೂ’ ಎಂದು ಹೇಳುತ್ತಾರೆ. ಕಾಬಾದಲ್ಲಿಯೂ ಸಹ ಶಿವಲಿಂಗಾಕಾರದ ಪ್ರತಿಮೆ ಇದೆ ಎಂದು ಸಂಶೋಧಕರು ನಂಬುತ್ತಾರೆ. ಶಿವಪರಮಾತ್ಮನು ಅವತರಿಸಿ ವಿಶ್ವ ಪರಿವರ್ತನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂಬುದು ಇದರಿಂದ ನಮಗೆ ಸ್ಪಷ್ಟವಾಗುತ್ತದೆ.

ಶಿವರಾತ್ರಿಯಲ್ಲಿ ಉಪವಾಸವನ್ನು ಮಾಡುತ್ತಾರೆ. ಇದರ ಅಧ್ಯಾತ್ಮಿಕ ಅರ್ಥವಾಗಿದೆ. ‘ಉಪ’ ಎಂದರೆ ‘ಸಮೀಪ’ ವಾಸ ಎಂದರೆ ‘ಇರುವುದು’. ವಾಸ್ತವಿಕವಾಗಿ ಬುದ್ದಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಕೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಜಾಗರಣೆ ಎಂದರೆ ಜಾಗೃತಿಯಾಗಿದೆ. ಅಜ್ಞಾನದಿಂದ ಹೊರಬರುವುದೇ ಅಥವಾ ಜಾಗೃತರಾಗುವುದೇ ಸತ್ಯ ಜಾಗರಣೆಯಾಗಿದೆ. ಈ ಅಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಜಾಗೃತವಾಗಿದ್ದುಕೊಂಡು ಮಾಯೆಯ ರೂಪವಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.

ಪರಮಾತ್ಮನ ಅವತರಣೆಯೇ ಮಹಾಶಿವರಾತ್ರಿ

ಶಿವ ಶಿವ ಎಂದರೆ ಭಯವಿಲ್ಲ,

ಶಿವ ನಾಮಕ್ಕೆ ಸಾಟಿ ಬೇರಿಲ್ಲ…..

ನಿಜವಾಗಲೂ ಶಿವನೆಂದರೆ ಅತಿಪ್ರಿಯವಾದ ಸರ್ವೋತ್ತಮ ಶಕ್ತಿ, ಭಕ್ತಿಮಾರ್ಗದಲ್ಲಿ ನಾಮ ಸ್ಮರಣೆಗೆ ಬಹಳ ಮಹತ್ವವಿದೆ. ಆದರೇ ಜ್ಞಾನಮಾರ್ಗದಲ್ಲಿ ಆಚರಣೆಯ ಜೊತೆ-ಜೊತೆಗೆ ಸ್ಮಂತಿ ಸ್ವರೂಪವಾಗಿರುವುದು ಮುಖ್ಯವಾಗಿದೆ. ಪ್ರಪಂಚದಲ್ಲಿ ಶಿವನ ಹೆಸರನ್ನು ಮನುಷ್ಯಾತ್ಮರು ಇಟ್ಟುಕೊಂಡಿರುವುದನ್ನು ನಾವು ಕಾಣುತ್ತೇವೆ. ಈ ಅನೇಕ ನಾಮಾವಳಿಗಳು ಈ ರೀತಿಯಾಗಿವೆ. ಶಿವರಾಜ. ಶಿವಕುಮಾರ, ಶಿವಪ್ಪ, ಶಿವಶಂಕರ, ಶಿವಪ್ರಸಾದ, ಶಿವಸ್ವಾಮಿ, ಶಿವಪುತ್ರ, ಶಿವಮಿತ್ರ, ಶಿವಮೂರ್ತಿ, ಶಿವಾನಂದ, ಶಿವನಗೌಡ, ಶಿವಯೋಗಿ, ಶಿವು, ಶಿವಾಜಿ, ಶಿವಾಜಿರಾವ್, ಶಿವದಾಸ, ಶಿವದೇದ, ಶಿವಣ್ಣ, ಶಿವಪಾಲ, ಶಿವಬೋಧ, ಶಿವಕಾಂತ, ಶಿವತೇಜ, ಶಿವನಾಥ, ಶಿವರಾಜು, ಶಿವಲಿಂಗ, ಶಿವಪ್ರಿಯ, ಶಿವರಾಜನ್, ಶಿವರುದ್ರ, ಶಿವನಾಗರ, ಶಿವರಾಜಕುಮಾರ, ಶಿವಮಣಿ, ಶಿವರಂಜನಿ, ಶಿವಪೂಜಾ, ಇತ್ಯಾದಿ.

ಭಾರತೀಯರು ಆಚರಿಸುವ ಎಲ್ಲಾ ಹಬ್ಬ-ಹರಿದಿನಗಳಲ್ಲಿ ‘ಶಿವರಾತ್ರಿಯೇ ಸರ್ವಶ್ರೇಷ್ಠ. ಶಿವರಾತ್ರಿಯಂದು ಪತಿತಪಾವನನೂ, ಜ್ಞಾನೇಶ್ವರನೂ ಆದ ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೆಶ್ರ‍್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ದ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಲ್ಲ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿ ಅಜ್ಞಾನವೆಂಬ ಕತ್ತಲು ಕವಿದಿರುವ ರಾತ್ರಿ ಇದಾಗಿರುತ್ತದೆ. ಅಜ್ಞಾನಾಂಧಕಾರ ಅವರಿಸಿರುವ ರಾತ್ರಿ ಇದಾಗಿರುತ್ತದೆ. ಯಾವಾಗ ಎಲ್ಲ ಮಾನವರು ಅರ‍್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿ ತುಳುಕುತ್ತಿವೆಯೋ, ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಕಪೋಲ-ಕಲ್ಪಿತ ಗ್ರಂಥಗಳು, ಅಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೇ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ ಯಾವಾಗ ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೆ’ ಎಂದು ಜನಸಾಮಾನ್ಯರು, ಸಾಧು-ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ ಅದೇ ಘೋರರಾತ್ರಿ, ಅದೇ ಮಹಾಶಿವರಾತ್ರಿಯ ಆಗಮನರಾತ್ರಿ ತಮಸೋಮಾ ಜ್ಯೋತರ‍್ಗಮಯ’, ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ ಸತ್ಯ ಜ್ಞಾನ ಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಶಿವಪರಮಾತ್ಮನ ಆಗಮನವೇ ‘ಸತ್ಯ ಶಿವರಾತ್ರಿ. ಆ ರಾತ್ರಿಗೆ ವಿಷ್ಣುರಾತ್ರಿ, ರಾಮರಾತ್ರಿ, ಕೃಷ್ಣರಾತ್ರಿ ಎಂದು ಯಾರೂ ಕರೆಯುವುದಿಲ್ಲ, ಆದರೆ ಶಿವರಾತ್ರಿ ಎಂದೇ ಕರೆಯಲಾಗುತ್ತಿದೆ. ಏಕೆಂದರೆ ಜ್ಞಾನಸಾಗರನೂ, ಸರ್ವಜ್ಞನೂ ಆಗಿರುವ ಶಿವಪರಮಾತ್ಮನೊಬ್ಬನೇ ಅಜ್ಞಾನಾಂಧಕಾರದ ರಾತ್ರಿಯನ್ನು ತನ್ನ ಜ್ಞಾನ ಪ್ರಕಾಶದಿಂದ ತೊಲಗಿಸಬಲ್ಲವನಾಗಿದ್ದಾನೆ. ಅಜ್ಞಾನಾಂಧಕಾರದ ರಾತ್ರಿಗೂ ಮತ್ತು ಆ‌ರ್’ನ ಸೂರ್ಯನಾದ ಪರಮಾತ್ಮನ ಆಗಮನದ ಸಮಯಕ್ಕೂ ಸಂಬಂಧವನ್ನು ಸೂಚಿಸುವ ಹಬ್ಬವೇ ಶಿವರಾತ್ರಿ ಅಥವಾ ಮಹಾಶಿವರಾತ್ರಿ ಸರ್ವ ಆತ್ಮರ ತಂದೆಯೊಬ್ಬನೇ, ಅವನೇ ನಿರಾಕಾರ ಶಿವನು, ಅವನೇ ಅಲ್ಲಾಹು, ಅವನೇ ಈಶ, ಅವನೇ ಗಾಡ್-ಓಂಕಾರನು, ದೇವನೊಬ್ಬ, ನಾಮ ಹಲವು ಭಕ್ತರೆನಿತೋ ಜಗದೊಳು. ಭಾವ ಒಂದೇ, ಭಾಷೆ ಹಲವು, ನಮ್ಮಲೇಕೆ ನಾನು ಹಿಂದೂ, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ, ನಾಳೆ ನಾಡನಾಳುವಂತಹ ಮಕ್ಕಳಲ್ಲಿ ಜಗಳವು ಎಕೆ? ಬ್ರಹ್ಮ, ವಿಷ್ಣು, ಬಸವ, ಎಸು, ನಾನಕ ಪೈಗಂಬರೆಲ್ಲ ಒಬ್ಬದೇವನ ಮಕ್ಕಳು. ಸರ್ವಧರ್ಮವನ್ನು ಬಿಟ್ಟು, ದೇಹ ರ‍್ಮವನ್ನು ಸುಟ್ಟು, ನಿರಾಕಾರ ಜ್ಯೋರ್ತಿಬಿಂದು ತಂದೆ ಶಿವನ ನೆನೆಯುವಾ ಪರಮಾತ್ಮನ ಅವತರಣೆ ಆಗಿದೆ! ವಿಚಿತ್ರವೆನಿಸಿದರೂ ಸತ್ಯವಾಗಿದೆ. ಇಂದಿನ ಸಂಪೂರ್ಣ ಸಮಾಜ ಮತ್ತು ಯುಗವು ವೈಜ್ಞಾನಿಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ವಿಜ್ಞಾನದ ಸಾಧನಗಳು ಯಾವುದೇ ವಸ್ತುವನ್ನು ಪರೀಕ್ಷಿಸುವ ಮತ್ತು ಸಂಶೋಧಿಸುವಲ್ಲಿ ತನ್ನ ಮಹತ್ವಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ. ಆದರೆ ಪರಮಾತ್ಮನ ಕಾರ್ಯಶೈಲಿಯು ಸಂಪೂರ್ಣ ಭಿನ್ನವಾಗಿದೆ. ಭಗವದ್ಗೀತೆಯಲ್ಲಿಯೂ ಸಹ ಭಗವಂತನು ಈ ರೀತಿ ಹೇಳಿದ್ದಾನೆ ‘ನಾನು ಸೃಷ್ಟಿಯಲ್ಲಿ ಅವತರಿತನಾದಾಗ ನನ್ನನ್ನು ಕೆಲವರಲ್ಲಿ ಕೆಲವರು ಮಾತ್ರ ಗುರುತಿಸುತ್ತಾರೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಇಂದು ಅದೇ ಆತ್ಮ-ಪರಮಾತ್ಮನ ಮಿಲನದ ವೇಳೆ ಮತ್ತು ಹೊಸ ಪ್ರಪಂಚದ ಸ್ಥಾಪನೆಯ ಕರ‍್ಯ ನಡೆಯುತ್ತಿದೆ. ಪರಮಾತ್ಮನ ಮಿಲನದ ರೀತಿಯು ಅತಿ ಭಿನ್ನವಾದುದು ಮತ್ತು ದಿವ್ಯವಾದುದು ಪರಮಾತ್ಮ ಮಿಲನದ ಅನುಭವವನ್ನು ೧೫ ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳು ಮಾಡಿದ್ದಾರೆ. ತಾವು ಸಹ ಈ ಅನುಭವನ್ನು ಮಾಡಿ.

 

 ಮಹಾಶಿವರಾತ್ರಿ

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ ಶಿವರಾತ್ರಿಯೇ ಸರ್ವಶ್ರೇಷ್ಠ’, ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನೂ ಆದ ‘ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಚಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಆಕ್ಷೆಶ್ರ‍್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ದ ಅಧಿಕಾರಗಳನ್ನು ದಯ ಪಾಲಿಸುತ್ತಾನೆಂದು ಭಾರತೀಯರ ನಂಬಿಕೆ ಇದೆ.

ಶಿವನ ಸತ್ಯ ಸಂದೇಶವನ್ನು ಸಾರುವ ಬೃಹತ ಲಿಂಗಾಕಾರದ ಶಿವಾಲಯಗಳನ್ನು ಈಶ್ವರೀಯ ವಿಶ್ವವಿದ್ಯಾಲಯದಿಂದ, ಗುಜರಾತಿನ ಸೋಮನಾಥದಲ್ಲಿ, ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿ, ಯಲ್ಲಾಪೂರದ ತಪೋವನದಲ್ಲಿ, ಹಾವೇರಿ, ಹೊಸಪೇಟೆ, ಬಳ್ಳಾರಿ ಹಾಗೂ ಗೋರ‍್ಣದಲ್ಲಿಯೂ ಸಹ ನಿರ್ಮಿಸಲಾಗಿದೆ.

ಮಹಾಶಿವರಾತ್ರಿಯ ಈ ಶುಭಸಮಯದಲ್ಲಿ ಸತ್ಯ ಜ್ಞಾನ ಮತ್ತು ರಾಜಯೋಗ ಕಲಿಯಲು, ಹತ್ತಿರದ ಆಧುನಿಕ ಶಿವಾಲಯಗಳಿಗೆ ಅಥವಾ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

 

 

 

 

Share

Leave a comment

Leave a Reply

Your email address will not be published. Required fields are marked *