ದಿನಾಂಕ 06/05/2026ನೇ ಬುಧವಾರದಂದು ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿರುವ RBIನಿಂದ ಮಾನ್ಯತೆ ಪಡೆದ ಮುಂಬೈ ಮೂಲದ Vakrangee ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ATM ಕೇಂದ್ರವು ತಾಜ್ ಡೆಕೋ ಲಿಂಕ್ ಇದರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಸೇವೆಗಾಗಿ ಕಾರ್ಕಳ ಬಸ್ ಸ್ಟ್ಯಾಂಡ್ ಹತ್ತಿರ ಕೆನರಾ ಬ್ಯಾಂಕ್ ಬಳಿಯ ಶ್ರೀನಿವಾಸ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ನೂತನ ATM ಕೇಂದ್ರದ ಉದ್ಘಾಟನೆಯನ್ನು ಕಾರ್ಕಳ ಪಡು ತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಜಯರಾಮ ಪ್ರಭುರವರು ನೆರವೇರಿಸಿ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ, ವೆಂಕಟೇಶ್ ಕಾಮತ್, ಪುರಸಭಾ ಮಾಜಿ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ,ಶಿವ ಜಾಹೀರಾತು ಸಂಸ್ಥೆಯ ವರದರಾಯ ಪ್ರಭು,ಕೂಷ್ಮಾ0ಡಿನಿ ಸಂಸ್ಥೆಯ ಮಾಲಕರಾದ ಜಿನೇಶ್ ಜೈನ್ ಬಜಗೋಳಿ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಭಾಗವಹಿಸಿ ದೀಪವನ್ನು ಬೆಳಗಿಸಿ ನೂತನ UPI ATM ಕೇಂದ್ರಕ್ಕೆ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ತಾಜ್ ಡೆಕೋ ಲಿಂಕ್ ಸಂಸ್ಥೆಯ ಮುಖ್ಯಸ್ಥರಾದ M. ಗಣಪತಿ ಪೈ,ಶ್ರೀಮತಿ ಗೀತಾ ಪೈ,ಪ್ರಿಯಾ0ಕ ಪೈ,M.ಜಗನ್ನಾಥ ಪೈ,ಶ್ರೀಮತಿ ಜ್ಯೋತಿ ಪೈ,ಶಿವಾನಂದ ಶೆಣೈ,B ರಜತ್ ಶೆಣೈ, ರಾಮಮೂರ್ತಿ ಶೆಣೈ, ವಿವೇಕ್ M.R, ಶ್ರೀನಿವಾಸ ಶೆಣೈ ಮತ್ತು ಗ್ರಾಹಕ ಬಂಧುಗಳು,ಹಿತೈಷಿಗಳು ಉಪಸ್ಥಿತರಿದ್ದರು.

ಕಾರ್ಕಳ ನಗರದಲ್ಲಿ Vakrangee ಸಂಸ್ಥೆಯ ಎರಡನೇ UPI MINI ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡುಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಮುಖ್ಯಸ್ಥರು ಮಾಧ್ಯಮದ ಮೂಲಕ ವಿನಂತಿಸಿದರು.


Leave a comment